ನಿಮ್ಮನ್ನೇ ನಂಬುವೆವು
ನಿಮ್ಮಂತೆ ಯಾರು ಇಲ್ಲಪ್ಪ (2)
ಅದ್ಭುತ ಮಾಡಪ್ಪ ನಮ್ಮ ಜೀವಿತದಿ
ನಿಮ್ಮನ್ನೇ ನಂಬುವೆವು ಯೆಸಪ್ಪ (2)
ನೀವೇ ಏನಾದರು ಮಾಡಬೇಕು
ನೀವೇ ಏನಾದರು ಮಾಡಬೇಕು
ಎಂದು ಎದುರ್ನೋಡುತ ಕಾಯುತ್ತ ಇರುವೆವು
2. ನೀ ಹೇಳಿದ ವಾಕ್ಯವನ್ನು ಹಿಡಿದುಕೊಂಡು
ನಿಮ್ಮ ಮುಖವನ್ನೇ ದೃಷ್ಟಿಸುತ್ತ ಇರುವೆವು (2)
ನಿಂದೆಯು ಅವಮಾನವ ಸಹಿಸಿಕೊಂಡು
ನಿನ್ ರೆಕ್ಕೆ ನೆರಳಲ್ಲಿ ಬಂದು ನಿಲ್ವೆವು (2)
ನಿಶ್ಚಯ ನೀ ಮಾಡುವೆ ಎಂದು ನಂಬಿ
ನಿಮ್ಮ ಕರವನ್ನೇ ದೃಷ್ಟಿಸುತ್ತ ಇರುವೆವು (2)