ನಿನ್ನೊಂದಿಗೆ ಜೀವನ
ಕಣ್ಣೀರಲ್ಲೂ ಸುಂದರ ಪಯಣ
ನಿನ್ನೊಂದಿಗೆ ಜೀವನ
ಕಣ್ಣೀರಲ್ಲೂ ಅಂದದ ಪಯಣ…(2)
ನೀನೇ ನನ್ನ ಪ್ರಾಣದಾರವೂ…
ನೀನೇ ನನ್ನ ಜೀವದಾರವು …(2)
ನೀನು ಇಲ್ಲದೆ ನಾನು ಜೀವಿಸಲಾರೆ
ನೀನು ಇಲ್ಲದೆ ನಾನು ಬದುಕಲಾರೆ
ನೀನು ಇಲ್ಲದೆ ನಾನು ಊಹಿಸಲಾರೆ
ನೀನು ಇಲ್ಲದೆ ನಾನು ಶೂನ್ಯವಯ್ಯ..(2)
ನಿನ್ನ ಮರೆತ ಕ್ಷಣವೇ
ಒಂದು ಯುಗವಾಗಿ ಅನಿಸಿತು ನನಗೆ..
ಮುರಿದ ಈ ಹೃದಯ
ಹುಡುಕಿತು ನಿನ್ನ ಪ್ರೀತಿಗಾಗಿ…(2)
(ನೀನೆ ನನ್ನ ಪ್ರಾಣದಾರವು)
ನಿನ್ನೊಂದಿಗೆ ಜೀವಿಸವೇ ನಾ ನಿರಂತರವು..
ನಿನ್ನನ್ನೇ ಪ್ರೀತಿಸುವೆ ನಾ ಸದಾಕಾಲವೂ..
ಲೋಕವೆಲ್ಲ ಹುಡುಕಿದೆ ನಾನು ಎಲ್ಲಾ ಶೂನ್ಯವೂ..
ಕೊನೆಗೆ ನೀನೆ ಉಳಿದಿರುವೆ ನೀನೆ ಸದಾ ಕಾಲವು.(2)
ನಿನ್ನ ಬಿಡೆನು ದೇವಾ
ನನ್ನ ಪ್ರಭುವೇ ನನ್ನ ಪ್ರಾಣದಾತ
ನಿನ್ನ ಕರದಿ ಮುರಿದು ನನ್ನ ಜಜ್ಜಿ ಸರಿಪಡಿಸು ಪ್ರಭುವೆ
ನಿನ್ನ ಬಿಡೇನೂ ದೇವಾ
ನನ್ನ ಪ್ರಭುವೇ ನನ್ನ ಪ್ರಾಣದಾತ
ನಿನ್ನ ಕರದಿ ಮುರಿದು ನನ್ನ ಜಜ್ಜಿ ಸರಿಪಡಿಸು ಪ್ರಭುವೆ …
(ನೀನೇ ನನ್ನ ಪ್ರಾಣದಾರವು)
ಪರಮ ತಂದೆ ನಿನಗೆ ವಂದನೆ…
ಯೇಸು ಸ್ವಾಮಿ ನಿನಗೆ ವಂದನೆ…
ಪವಿತ್ರಾತ್ಮ ನಿನಗೆ ವಂದನೆ…
ತ್ರಿಯೇಕನೆ ಕಣೆ ನಿನಗೆ ವಂದನೆ…(2)